ಆರಂಬೋಡಿ, ಕೈರೋಡಿ: ಜಾನಪದ ಜ್ಞಾನ ದಾಖಲೀಕರಣ ಯೋಜನೆಗೆ ಚಾಲನೆ

                                          ಸಿದ್ದಕಟ್ಟೆ: ಜ್ಞಾನ ಎಂಬುದು ಪಠ್ಯಕ್ಕೆ ಸೀಮಿತ  ಎಂಬ ಭ್ರಮೆ ಸಲ್ಲದು. ಸಮುದಾಯದ  ಜ್ಞಾನವನ್ನು ಬಳಸುವಂತಾಗಬೇಕು.  ಜಾನಪದ  ಸಾಹಿತ್ಯ ಸಂಗ್ರಹ ಮತ್ತು ಸಂಶೋಧನೆಯ ಮೂಲಕ ಪ್ರಾದೇಶಿಕ ಚರಿತ್ರೆಯನ್ನು ಮರು ರೂಪಿಸುವುದು ಸಾಧ್ಯವಿದೆ. ಶೈಕ್ಷಣಿಕವಾಗಿಯೂ ಮಹತ್ವವಿದೆ ಎಂದು ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ‌  ಪ್ರಾಂಶುಪಾಲ ಉದಯ ಕುಮಾರ್ ನುಡಿದರು.   ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ‌ ಗುಣಮಟ್ಟ  ಖಾತರಿ ಕೋಶದ ವತಿಯಿಂದ ಆರಂಬೋಡಿ ಕೈರೋಡಿಯಲ್ಲಿ ನಡೆದ ಜಾನಪದ ಜ್ಞಾನ ದಾಖಲೀಕರಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.  


 ಕಲೆ  ಸಂಸ್ಕೃತಿಯ ವಾತಾವರಣದಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂಬ ಆಳ್ವಾಸ್ ಸಂಸ್ಥೆಯ ಕಲ್ಪನೆ ದೇಶಕ್ಕೆ ಮಾದರಿ ಎಂದರು. 



ಅಧ್ಯಕ್ಷತೆ ವಹಿಸಿ ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕುಂಜಾಡಿ ಮಾತಾಡಿ ಗ್ರಾಮದ ಜಾನಪದ ಹಾಡುಗಳ ಸಂಗ್ರಹಕ್ಕೆ ಸಹಕಾರ ನೀಡಲು ಪಂಚಾಯತು ಬದ್ದವಾಗಿದೆ‌ ಎಂದರು. ಸಂಯೋಜಕ ಡಾ. ಯೋಗೀಶ ಕೈರೋಡಿ ಮಾತಾಡಿ ಸಂಧಿ ಪಾಡ್ದನ ತಿಳಿದಿರುವ ಕೊನೆಯ ತಲೆಮಾರು ನಮ್ಮ‌ಮುಂದಿದೆ. ಕಾಲಗರ್ಭಕ್ಕೆ ಸೇರುವ ಅಮೂಲ್ಯ ಜನಪದ ಅನುಭವಗಳ ದಾಖಲೀಕರಣ ಆಗಬೇಕಾಗಿದೆ ಎಂದರು ಆಳ್ವಾಸ್ ಸಂಸ್ಥೆಯ ಹರೀಶ್ ಟಿ‌.ಜಿ‌, ಹಿರಿಯ ಜಾನಪದ ಹಾಡುಗಾರ್ತಿ ಪುಷ್ಪ ಕುಸುಮ ಸಾಲ್ಯಾನ್, ಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ, ಉಪನ್ಯಾಸಕರಾದ ಚೈತ್ರ, ನಿತ್ಯಲತಾ ಉಪಸ್ಥಿತರಿದ್ದರು. ಶ್ರಾದ್ದಾ ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಉಮಾಶ್ರೀ, ವೈಶಾಖ್ ನಿರ್ವಹಿಸಿದರು.