ಗಾಂಧೀಜಿ ಕನಸು, ಪಂಡಿತ್ ದೀನ್ ದಯಾಳ್ ಯೋಚನೆ ನನಸಾಗಲು ಸಮಾನ ನಾಗರಿಕ ನೀತಿ ಸಂಹಿತೆ ಕಾನೂನು ಜಾರಿ ಅಗತ್ಯ-ಪ್ರಭಾಕರ ಪ್ರಭು

ಬಂಟ್ವಾಳ: ಭಾರತದಲ್ಲಿ 12 ಗಂಟೆ ರಾತ್ರಿ ಸಮಯದಲ್ಲಿ ಒಬ್ಬಳು ಮಹಿಳೆ ನಿರ್ಭಿತಿಯಿಂದ ಓಡಾಡುವ ಧೈರ್ಯ ಬಂದಾಗ ರಾಷ್ಟ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ. ಆ ಮೂಲಕ ಭಾರತ ರಾಮ ರಾಜ್ಯವಾಗಲಿದೆ ಎಂದು ಗಾಂಧೀಜಿ ಕನಸು ಕಂಡಿದ್ದರು. ಈ ಕನಸಿಗೆ ಪೂರಕವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಹಲವು ಯೋಜನೆ ಜಾರಿಗೊಳಿಸಿ ರಾಮ ರಾಜ್ಯದ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪಂಡಿತ್ ದಿನ್ ದಯಾಳ್ ಉಪಾಧ್ಯಾಯರ ಪರಿಕಲ್ಪನೆ ಗಳನ್ನು ಸಹ ಅನುಷ್ಠಾನ ಮಾಡುತ್ತಿದ್ದಾರೆ.
ಗಾಂಧಿ ಕನಸಿನೊಂದಿಗೆ ಮತ್ತು ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ದೂರದೃಷ್ಟಿ ಯೋಚನೆಗಳು
ನನಸಾಗಬೇಕಾದರೆ ಭಾರತದಲ್ಲಿ ಶೀಘ್ರದಲ್ಲಿ ಸಮಾನ ನಾಗರಿಕ ನೀತಿ ಸಂಹಿತೆ ಜಾರಿಯಾಗಬೇಕಾಗಿದೆ ಎಂದು ಬಂಟ್ವಾಳ ಮಂಡಲ ಬಿಜೆಪಿ ಸಮಿತಿಯ ಕಾವಳ ಪಡೂರು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಹೇಳಿದರು.


ಗಾಂಧಿ ಜಯಂತಿ ಪ್ರಯುಕ್ತ ಕರ್ಪೆ ಬೂತ್ ಸಂಖ್ಯೆ 2 ರ ವತಿಯಿಂದ ಅಧ್ಯಕ್ಷ ನವೀನ್ ಪುಜಾರಿ ಮನೆಯಲ್ಲಿ ನಡೆದ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಚಂದ್ರಹಾಸ ಜಾನುಗುರಿ,ಅನುಷ್ ಪೂಜಾರಿ ಆಡಂಗಾಜೆ, ಗಗನ್ ಜಾನುಗುರಿ,ಹೊನ್ನಪ್ಪ, ಜಯ ಕುಪ್ಪೆಟ್ಟು,ವೀಕ್ಷಿತ್ ಅಡಂಗಾಜೆ ಉಪಸ್ಥಿತರಿದ್ದರು.
ಬೂತ್ ಅಧ್ಯಕ್ಷ ನವೀನ್ ಪೂಜಾರಿ ಸ್ವಾಗತಿಸಿ,ಬೂತ್ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಶೆಟ್ಟಿಬೆಟ್ಟು ವಂದಿಸಿದರು.