ಉದ್ಯಮಿ, ಕೊಡುಗೈ ದಾನಿ, ಸಂಘಟಕ ಹಂಝ ಬಸ್ತಿಕೋಡಿ ಅವರ ಅನನ್ಯ ಸಮಾಜಸೇವೆಗೆ “ಸ್ವಸ್ತಿಸಿರಿ” ರಾಜ್ಯ ಪ್ರಶಸ್ತಿ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಉದ್ಯಮಿ, ಕೊಡುಗೈ ದಾನಿ, ಸಂಘಟಕ, ಸಮಾಜ ಸೇವಕ ಹಂಝ ಬಸ್ತಿಕೋಡಿ ಅವರ ಅನನ್ಯ ಸಮಾಜ ಸೇವೆಗೆ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರಾಪ್ತವಾಗಿದೆ. ವಾಮದಪದವು ಬಸ್ತಿಕೋಡಿ ನಿವಾಸಿ ಅಬ್ದುಲ್ ರಹಿಮಾನ್ ಹಾಗೂ ಜಮೀಲಾ ದಂಪತಿಯ ಪುತ್ರ ಹಂಝ ಬಸ್ತಿಕೋಡಿ ಅವರು 2 ದಶಕಗಳ ಕಾಲ ಮುಂಬೈಯಲ್ಲಿ ಉದ್ಯಮಿಯಾಗಿದ್ದು ಪ್ರಸ್ತುತ ಊರಿನಲ್ಲಿ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಉದ್ಯಮದ ಜತೆಯಲ್ಲಿ ವಿಶೇಷ ಮಾನವೀಯ ಕಾಳಜಿ, ಕಷ್ಟಗಳಿಗೆ ಸ್ಪಂದಿಸುವ ಮನಸ್ಸು, ಬಡವರ ಮೇಲಿನ ಅನುಕಂಪದೊಂದಿಗೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರೀಯರಾಗಿದ್ದಾರೆ.

ಕ್ರೀಡೆ, ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಬದುಕಿನಲ್ಲಿ ನೊಂದು ಬೆಂದ ಬಂದವರಿಗೆ ತನ್ನಿಂದಾದ ನೆರವು ನೀಡುತ್ತಿದ್ದಾರೆ.

ಸಂಘಟನೆಗಳಲ್ಲಿ ಸಕ್ರೀಯ:

ಮುಂಬೈಯ ತುಳು ಸಂಘದ ಪದಾಧಿಕಾರಿಯಾಗಿ, ತುಳುನಾಡ ತುಡರ್ ಕಲಾವೃಂದದ ಸದಸ್ಯರಾಗಿ, ಲಯನ್ಸ್ ಕ್ಲಬ್ ವಾಮದಪದವು ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಹಂಝ
ಪ್ರಸ್ತುತ ನೂರುಲ್ ಇಸ್ಲಾಂ ಮದ್ರಸ ಹಾಗೂ ಅಲ್ ಮಸ್ಜಿದುಲ್ ಬದ್ರಿಯಾ ಆಲದಪದವು ಇದರ ಅಧ್ಯಕ್ಷರಾಗಿ, ಮತ್ತು ಬದ್ರಿಯಾ ಜುಮ್ಮಾ ಮಸ್ಜಿದ್ ಮಾವಿನಕಟ್ಟೆ ಆಡಳಿತ ಮಂಡಳಿಯ ಸದಸ್ಯರಾಗಿ, ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾಮದಪದವು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ, ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು ೪೦೦-೫೦೦ ರೋಗಿಗಳ ಸಹವರ್ತಿಗಳಿಗೆ ಕಾರುಣ್ಯ ಯೋಜನೆಯ ಮೂಲಕ ಆಹಾರ ನೀಡುವ M-FRIENDS MANGLOARE
ಟ್ರಸ್ಟ್, ಪ್ರತಿ ತಿಂಗಳು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಹಾಗೂ ಉಚಿತವಾಗಿ AMBULANCE ಒದಗಿಸುವ FRIENDS FOR POOR CHARITABLE TRUST MANGLOARE, ಜಂಇಯ್ಯತುಲ್ ಫಲಾಹ್ ಬಂಟ್ವಾಳ, ಬಂಟ್ವಾಳ ತಾಲೂಕ್ ಸಂಯುಕ್ತ ಜಮಾತ್, ಹಿದಾಯ ಫೌಂಡೇಶನ್ ಮಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ, ಪದವಿ ಪೂರ್ವ ಕಾಲೇಜ್ ವಾಮದಪದವು ಆಡಳಿತ ಮಂಡಳಿ ಸದಸ್ಯರಾಗಿ, ಬಂಟ್ವಾಳ ತಾಲೂಕ್ ಹೋಟೆಲ್ ಅಸೋಸಿಯೇಷನ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಜಿ.ಕೆ ಸ್ಮಾರ್ಟ್ ಸಿಟಿ ಅಂಗಡಿ ಮಾಲಕರ ಅಸೋಸಿಯೇಷನ್ ಕಾರ್ಯದರ್ಶಿಯಾಗಿ, ಲಯನ್ಸ್ ಕ್ಲಬ್ ವಾಮದಪದವು ಉಪಾಧ್ಯಕ್ಷ ಸಹಿತ ಹಲವಾರು ಸಂಘಟನೆಗಳಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾ.24ರಂದು ಪ್ರಶಸ್ತಿ ಸ್ವೀಕಾರ:

ಪತ್ನಿ ಅನೀಷಾ ಮತ್ತು ಮಕ್ಕಳಾದ ಆನಿಯಾ ಮತ್ತು ಆಲಿಯಾ ಅವರೊಂದಿಗೆ ಸಂತೃಪ್ತಿ ಜೀವನ ಸಾಗಿಸುತ್ತಿದ್ದು ವ್ಯಕ್ತಿತ್ವದಲ್ಲಿ ಸನ್ನಡತೆ, ಕರ್ತವ್ಯದಲ್ಲಿ ದಕ್ಷತೆ, ಸೇವೆಯಲ್ಲಿ ಪ್ರಾಮಾಣಿಕತೆ, ಹೃದಯದಲ್ಲಿ ಮಾನವೀಯತೆಯ ತತ್ವವನ್ನು ಮೈಗೂಡಿಸಿಕೊಂಡಿರುವ ಹಂಝ ಅವರಿಗೆ ಸಹಜವಾಗಿಯೇ ಪ್ರಶಸ್ತಿ ಒಲಿದು ಬಂದಿದೆ. ಮಾ.24ರಂದು ಪುಂಜಾಲಕಟ್ಟೆಯಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಸರ್ವಶಕ್ತಿಗಳ ಪೂರ್ಣಾನುಗ್ರಹ ಅವರ ಮೇಲಿರಲಿ ಎಂದು ಯುವಧ್ವನಿ ಬಳಗ ಶುಭ ಹಾರೈಸುತ್ತದೆ.
????????????????????????????????????
———–+++++++—————++