ಪಾಂಗಲ್ಪಾಡಿಯಲ್ಲಿ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ವಿಶೇಷ ಕಾರ್ಯಕ್ರಮ

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಶಾಖೆಯ ವತಿಯಿಂದ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ ಹಾಗೂ ಮಾತೃ ಭೋಜನ ಎಂಬ ವಿಶೇಷ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸತ್ಯನಾರಾಯಣ ಸಭಾಂಗಣದಲ್ಲಿ ನಡೆಯಿತು

ಜಿಲ್ಲಾ ಪ್ರಶಿಕ್ಷಣ ಮತ್ತು ಚಿಂತನ ಕೂಟದ ಪ್ರಮುಖರಾದ ಲೋಕೇಶ್ ಮಾತನಾಡಿ ತಾಯಿ ನಿಸ್ವಾರ್ಥತೆಯ ಪ್ರತಿರೂಪ. ಅವಳ ಪರಿಶುದ್ಧ ಪ್ರೀತಿಯಿಂದ ಮಕ್ಕಳು ಹಂತ ಹಂತವಾಗಿ ಬೆಳೆದು ನಿಜಾರ್ಥದಲ್ಲಿ ಮನುಷ್ಯರಾಗುತ್ತಾರೆ. ತಾಯಿಯ ನಿಸ್ವಾರ್ಥ ಪ್ರೇಮಕ್ಕೆ ಇಡೀ ಸಮಾಜವನ್ನೇ ಉನ್ನತ ಸ್ತರಕ್ಕೇರಿಸುವ ಶಕ್ತಿ ಇದೆ ಎಂದು ಹೇಳಿದರು.

ಅಶ್ವಿನಿ ಕ್ಲಿನಿಕ್‌ನ ವೈದ್ಯರಾದ ರಮ್ಯಾ ಬಲ್ಲಾಳ್ ಮಾತನಾಡಿ ಆರೋಗ್ಯವಂತ ಜೀವನಕ್ಕೆ ಯೋಗದ ಅವಶ್ಯಕತೆ ಮತ್ತು ಪ್ರಸ್ತುತ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಯೋಗ ಹೇಗೆ ರಾಮಬಾಣವಾಗಿದೆ ಎಂದು ತಿಳಿಸಿದರು.

ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರೀ ಶಾಖೆಯ ಸಹ ಸಂಚಾಲಕರಾದ ದೀಪಿಕಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕಾರ-ಸಂಘಟನೆ-ಸೇವೆ ಎನ್ನುವ ದ್ಯೇಯೋದ್ದೇಶವನ್ನು ಹೊಂದಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸಂಸ್ಕಾರಗಳನ್ನು ಕಲಿಸುವಂತಹ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ತಂದೆ ತಾಯಿಯನ್ನು ಹಾಗೂ ಹಿರಿಯರನ್ನು ಪೂಜಿಸಿ, ಗೌರವಿಸುವ ಮಾತೃ ವಂದನ ಮತ್ತು ಮಾತೃ ಪೂಜನ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಶಾಖೆಯ ಸಂಚಾಲಕ ಪುನೀತ್ ಶೆಟ್ಟಿ ವರದಿ ವಾಚನ ಮಾಡಿದರು. ಯೋಗ ಬಂಧು ಪ್ರತಿಭಾ ಸ್ವಾಗತಿಸಿದರು. ಸಂದ್ಯಾ ಆರ್. ಕೋರ್ನಾಯ ಕಾರ್‍ಯಕ್ರಮ ನಿರೂಪಿಸಿದರು. ಸುಪ್ರಭಾ ವಂದಿಸಿದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318