ಬಂಟ್ವಾಳ ತಾಲೂಕಿನ ಏಕೈಕ ಆಲಡೆ ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯಲ್ಲಿ ವೈಭವಯುತವಾಗಿ ಸಂಪನ್ನಗೊಂಡ ಬ್ರಹ್ಮಕಲಶೋತ್ಸವ

ಬಂಟ್ವಾಳ: ತಾಲೂಕಿನ ಏಕೈಕ ಆಲಡೆ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯಲ್ಲಿ ಬ್ರಹ್ಮಕಲಶೋತ್ಸವವು ಶನಿವಾರ ವಿವಿಧ ವೈಧಿಕ-ಧಾರ್ಮಿಕ ವಿಧಾನಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು.


ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ, ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯರ ನೇತೃತ್ವದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಂಟೆ 8ರ ಸುಮುಹೂರ್ತದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ನಾಗದೇವರು, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಕುಮಾರ, ಸಿರಿ, ಅಬ್ಬಗ ದಾರಗ, ಬೈಲಾಂಡಿ ಪಂಜುರ್ಲಿ, ಮಹಾಮ್ಮಾಯಿ ಶಕ್ತಿಗಳಿಗೆ ಬ್ರಹ್ಮಕಲಾಶಾಭಿಷೇಕ ನಡೆಯಿತು.
ವಾದ್ಯ ವಾಲಗಗಳ ನಿನಾದ, ಅಪಾರ ಸಂಖ್ಯೆಯ ಭಕ್ತಾದಿಗಳ ಸಮಕ್ಷಮದೊಂದಿಗೆ ಬ್ರಹ್ಮಕಲಾಶಾಭಿಷೇಕವು ವಿದ್ಯುಕ್ತವಾಗಿ ನೆರವೇರಿತು. ಇದೇ ವೇಳೆ ಶ್ರೀ ಉಮಾಮಹೇಶ್ವರ ಬ್ರಹ್ಮಲಿಂಗೇಶ್ವರ ಬಾಲ ಭಜನಾ ಮಂಡಳಿ ಸಿರಿಗುಂಡದಪಾಡಿ ಇವರಿಂದ ಕುಣಿತ ಭಜನೆ, ಎಲ್.ಕೆ.ಧರಣ್ ಮಾಣಿ ಮತ್ತು ತಂಡದವರಿಂದ ಭಜನಾ ಸಂಕೀರ್ತಣೆ ನಡೆಯಿತು.

ಧಾರ್ಮಿಕ ಸಭೆ:

ಈ ಸಂದರ್ಭ ಕುಮಾರ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಿದ್ವಾನ್ ಪಂಜ ಕೆ.ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ನೇತಾರ ಶ್ರೀಪತಿ ಭಟ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು.
ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯ, ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ
ಡಾ.ಗಿರೀಶ್ ಭಟ್ ಅಜೆಕ್ಕಳ, ವಾಸ್ತು ತಜ್ಞ ಮೋನಪ್ಪ ಆಚಾರ್ಯ ಬೈದಗುತ್ತು ಕೊಯಿಲ, ಜಯಂತ್, ಉದ್ಯಮಿ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಪಿಲಾತಬೆಟ್ಟು ಸಹಕಾರಿ ಬ್ಯಾಂಕು ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ನ್ಯಾಯವಾದಿ ಪ್ರಸಾದ್ ರೈ ಬಿ.ಸಿ.ರೋಡು, ಗೋಪಾಕೃಷ್ಣ ಜೋಷಿ ಮುಳ್ಳುಂಜ, ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ಧಕಟ್ಟೆ, ಉದ್ಯಮಿಗಳಾದ ಮನೋಹರ ಶೆಟ್ಟಿ ಕೋಡಿಬೆಟ್ಟು, ದಿವಾಕರ ಶೆಟ್ಟಿ ಮಡ್ಯಾರು, ಪ್ರಮೋದ್ ರೈ ಕಾಡಬೆಟ್ಟು ಅತಿಥಿಗಳಾಗಿ ಭಾಗವಹಿಸಿದರು.
ಆಡಳಿತ ಸಮಿತಿ ಗೌರವಾಧ್ಯಕ್ಷ ಮುರಳೀಧರ ಕೆದಿಲಾಯ ಮಂಗಳೂರು, ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿ, ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಕಾರ್ಯಾಧ್ಯಕ್ಷ ಜಿ.ಕೆ.ಭಟ್ ವಾಮದಪದವು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಭಟ್ ನೆಕ್ಕಿತರವು, ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗ ಶೆಟ್ಟಿ ಬಂಗೇರಕೆರೆ, ಅಧ್ಯಕ್ಷ ಬೂಬ ಸಪಲ್ಯ ಮುಂಡಬೈಲು, ಕಾರ್ಯಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಸಮಿತಿ ಪ್ರಮುಖರಾದ ವೆಂಕಪ್ಪ ಮೂಲ್ಯ ಬಂಗೇರಕೆರೆ, ಲೋಕನಾಥ ಶೆಟ್ಟಿ ನರ್ವಲ್ದಡ್ಡ, ಮಂಜುನಾಥ ಪೂಜಾರಿ ಮುಂಡಬೈಲು, ಗಣೇಶ ಶೆಟ್ಟಿ ಸೇವಾ, ಪದಾಧಿಕಾರಿಗಳು ಮತ್ತು ಉಪಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಹರ್ಷ ಶೆಟ್ಟಿ ಭಂಡಾರದಬೆಟ್ಟು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ವಂದಿಸಿದರು.
ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಮತ್ತು ತಂಡದವರಿಂದ ಭರತನಾಟ್ಯ ವೈಭವ ನಡೆಯಿತು.
ಸಾಂಸ್ಕ್ರತಿಕ ಸಮಿತಿ ಸಂಚಾಲಕರಾದ ಸತೀಶ್ ಕರ್ಕೇರಾ ಕಯ್ಯಾಬೆ ಮತ್ತು ನಾಗೇಶ್ ಪೂಜಾರಿ ಮುಂಡಬೈಲು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಸಿರಿಜಾತ್ರೆಯ ವೈಭವ:

ರಾತ್ರಿ ಬ್ರಹ್ಮದರ್ಶನ, ಬ್ರಹ್ಮ-ಕುಮಾರ ಭೇಟಿ, ಸಿರಿ-ಕುಮಾರ-ಅಬ್ಬಗ ದಾರಗ ದರ್ಶನ, ಬೈಲಾಂಡಿ‌ ಪಂಜುರ್ಲಿ ಗಗ್ಗರ ಸೇವೆ, ಮಹಾಮ್ಮಾಯಿ‌ ದರ್ಶನ, ಕುಮಾರ-ಬೈಲಾಂಡಿ ಪಂಜುರ್ಲಿ, ಮಹಾಮ್ಮಾಯಿ ಭೇಟಿಯೊಂದಿಗೆ ಸಿರಿಜಾತ್ರೆಯು‌ ವೈಭವಯುತವಾಗಿ ಸಂಪನ್ನಗೊಂಡಿತು.

ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಸಿರಿಜಾತ್ರೆಯಲ್ಲಿ‌ ಪಾಲ್ಗೊಂಡರು.

ವರದಿ: ಗೋಪಾಲ ಅಂಚನ್

ಸಂಪಾದಕರು: ಯುವಧ್ವನಿ ನ್ಯೂಸ್ ಕರ್ನಾಟಕ

.9449104318