ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ ರಮಾನಾಥ ರೈಯವರು ನೈಜ ಹಿಂದುತ್ವದ ಪ್ರತಿಪಾದಕರು-ಅಮೃತ ಶೆಣೈ

ಬಂಟ್ವಾಳ: ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈಯವರು ನೈಜ ಹಿಂದುತ್ವದ ಪ್ರತಿಪಾದಕರು. ಆದರೆ ಪರಿಶುದ್ಧ ರಾಜಕಾರಣಿಯಾಗಿರುವ ರೈಯವರನ್ನು ಅಪಪ್ರಚಾರದಿಂದ ಸೋಲಿಸಲಾಗಿದೆ. ಆದರೆ ಬಿಜೆಪಿಯವರ ನಖಲಿ ಹಿಂದುತ್ವ ಈಗ ಬಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮೃತ ಶೆಣೈ ಹೇಳಿದ್ದಾರೆ.

ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ವಾಮದಪದವು ಬಸ್ತಿಕೋಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು
ಮನುಷ್ಯ ಸಾವಿನಲ್ಲೂ ಲಾಭ-ನಷ್ಟದ ಲೆಕ್ಕ ಹಾಕುವ ಏಕೈಕ ಪಕ್ಷ ಇದ್ರೆ ಅದು ಬಿಜೆಪಿ ಮಾತ್ರ. ದೇವರು ಮೆಚ್ಚುವ ಅತೀ ಹೆಚ್ವು ಧಾರ್ಮಿಕ ಕೈಂಕರ್ಯಗಳನ್ನು ಮಾಡಿದ ರೈಯವರನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ಮರ್ಯಾದೆ ಮೀರಿ ಮಾಡಬಾರದ್ದೆಲ್ಲವನ್ನೂ ಮಾಡುವ ಬಿಜೆಪಿಗರು ಹಿಂದೂ ರಕ್ಷಕರು. ಇದುವೇ ಈ ನಾಡಿನ ಬಹುದೊಡ್ಡ ದುರಂತವಾಗಿದೆ ಎಂದರು.

ಅಧಿಕಾರಕ್ಕಾಗಿ ಎಂತಹ ಹೇಯ ಮಟ್ಟಕ್ಕೂ ಇಳಿಯಲು ಹೇಸದ ಬಿಜೆಪಿಗರು ಕೊಲೆಯನ್ನೂ ಮಾಡಿ ಗೊಂದಲ ಸೃಸ್ಟಿಸಿ ಮತವಾಗಿ ಪರಿವರ್ತಿಸುವ ಪ್ರಯತ್ನ ಮಾಡ್ತಾರೆ. ಆದ್ದರಿಂದ ಕಾಂಗ್ರೆಸ್ಸಿಗರು ಬಹಳಷ್ಟು ಜಾಗರೂಕರಾಗಿರಬೇಕು ಎಂದು ಶೆಣೈ ಸಲಹೆ ನೀಡಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜನರಿಗಾಗಿ ಕೆಲಸ ಮಾಡಿದವರನ್ನು, ಜನಪರ ಕಾಳಜಿಯುಳ್ಳವರನ್ನು ಆಯ್ಕೆ ಮಾಡಿಲ್ಲ. ಬಿಜೆಪಿ ಪಕ್ಷದಿಂದ ನಾಲಾಯಕ್ ಗಳನ್ನೇ ಗೆಲ್ಲಿಸಿದ ನಮ್ಮ ಜನ ಇದೀಗ ಕೈ ಕೈ ಬಡಿದುಕೊಳ್ಳುವಂತಾಗಿದೆ. ಬಿಜೆಪಿ ನಾಯಕರಲ್ಲಿ ಕೋಟಿ ಕೋಟಿ ಕಂತೆಗಟ್ಟಲೆ ನಗದು ಹಣ ಸಿಗುತ್ತಿದೆ ಎಂದಾದರೆ ಇವರ ಉದ್ದೇಶ ಏನೆಂಬುದು ದೇಶದ ಜನರಿಗೆ ಅರ್ಥವಾಗುತ್ತಿದೆ ಎಂದು ಶೆಣೈ ಹೇಳಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ರಮಾನಾಥ ರೈಯವರನ್ನು ಸೋಲಿಸಿದ ಪರಿಣಾಮ ಕ್ಷೇತ್ರದ ಜನತೆ ಸೋತಿದ್ದಾರೆ. ರಮಾನಾಥ ರೈ ಮಾಡುವಷ್ಟು ಕೆಲಸ ಮಾಡುವ ಜನಪ್ರತಿನಿಧಿ ಇನ್ನೊಬ್ಬರಿಲ್ಲ. ವಿರೋಧ ಪಕ್ಷದಲ್ಲಿದ್ದರೂ, ಶಾಸಕ ಅಲ್ಲದಿದ್ದರೂ ಅವರ ಮನೆಯಲ್ಲಿ ಇಂದಿಗೂ ಅಹವಾಲು ಮಂಡಿಸಲು ಬರುವ ಸಾರ್ವಜನಿಕರಷ್ಟು ಯಾವುದೇ ಶಾಸಕರ ಮನೆ-ಕಚೇರಿಯಲ್ಲೂ ಇರಲಿಕ್ಕಿಲ್ಲ. ಅಭಿವೃದ್ದಿಯಲ್ಲಿ ರೈ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಅಪಪ್ರಚಾರ, ಸುಳ್ಳಿನಿಂದ ಮಾತ್ರ ಸೋಲಾಗಿದೆ. ಮುಂದೆ ಆಗಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಬೇಕಾಗಿದೆ ಎಂದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ನಾನು ಸೋತದ್ದಕ್ಕೆ ಬೇಜಾರಿಲ್ಲ. ಆದರೆ ಅಪಪ್ರಚಾರದಿಂದ ಜನರ ದಾರಿ ತಪ್ಪಿಸಿದ್ದಕ್ಕೆ ಬೇಸರವಿದೆ. ಹತ್ಯಾ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂಬುದನ್ನು ಪೆÇಲೀಸ್ ಕಡತ ಸಾಬೀತುಪಡಿಸಿದರೂ ಅದನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಟ್ಟ ಸಂಪ್ರದಾಯದ ಮೂಲಕ ರಾಜಕೀಯ ಲಾಭ ಪಡೆಯುವ ಸನ್ನಿವೇಶವನ್ನು ಬಿಜೆಪಿಗರು ನಿರ್ಮಾಣ ಮಾಡ್ತಾರೆ. ಈ ಬಗ್ಗೆ ಕಾಂಗ್ರೆಸಿಗರು ಜಾಗೃತರಾಗಬೇಕು ಎಂದರು.

ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷದ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಬಿ.ಎಂ. ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಸುದರ್ಶನ್ ಜೈನ್, ಜಗದೀಶ ಕೊಯಿಲ, ಲೋಲಾಕ್ಷ ಶೆಟ್ಟಿ, ಸಂಜೀವ ಪೂಜಾರಿ, ಅರ್ಶದ್ ಸರವು, ರಾಜೇಶ್ ರೋಡ್ರಿಗಸ್, ಪಿ ಎ ರಹೀಂ, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು,  ಸ್ಟೀವನ್ ಡಿ ಸೋಜ, ವಾಸು ಪೂಜಾರಿ, ಉಮೇಶ್ ಬೋಳಂತೂರು, ಸುರೇಶ್ ಜೋರಾ, ಶಬೀರ್ ಸಿದ್ಧಕಟ್ಟೆ, ಡೆಂಝಿಲ್,  ಅಮ್ಮು ರೈ ಹರ್ಕಾಡಿ, ಯುವರಾಜ ಆಳ್ವ,  ಭಾರತಿ ರಾಜೇಂದ್ರ,  ಉದಯ ಕುಮಾರ್ ಶೆಟ್ಟಿ, ಆನಂದ ಆಚಾರ್ಯ, ಪದ್ಮನಾಭ ಸಾಮಂತ ಮೊದಲಾದವರಿದ್ದರು.

ಚೆನ್ನೈತ್ತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. 

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318