ಜನರ ಆರೋಗ್ಯ ಪಾಲನೆಯಲ್ಲಿ ರಾಜೇಶ್ ನಾಯ್ಕ್ ಕಾರ್ಯ ರಾಜ್ಯಕ್ಕೆ ಮಾದರಿ-ಪ್ರಭಾಕರ ಪ್ರಭು.

ಸಿದ್ಧಕಟ್ಟೆ: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಗ್ರಾಮೀಣ ಜನತೆಯ ಆರೋಗ್ಯ ಸಂರಕ್ಷಣೆಗಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಾಲೂಕು ಪಂಚಾಯತು ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಬಡವರಿಗೆ ಆಹಾರ ಕಿಟ್ ವಿತರಣೆ, ಸರಕಾರಿ ಅಸ್ಪತ್ರೆಗಳಿಗೆ ಇ. ಸಿ. ಜಿ. ವ್ಯವಸ್ಥೆ ಸಹಿತ ಮೂಲಭೂತ ಅಗತ್ಯಗಳ ಒದಗಣೆಯೊಂದಿಗೆ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರ ಆರೋಗ್ಯ ತಪಾಸಣೆಗಾಗಿ ಸಂಚಾರಿ ಆರೋಗ್ಯ ಸುರಕ್ಷಾ ಬಸ್ ಸೇವೆ ಕಲ್ಪಿಸುವ ಮೂಲಕ ರಾಜೇಶ್ ನಾಯ್ಕ್ ಅವರು ಜನರ ಆರೋಗ್ಯ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಪ್ರಭು ಹೇಳಿದರು.
ಕರ್ಪೆ ಗ್ರಾಮಕ್ಕೆ ಆಗಮಿಸಿದ ಸಂಚಾರಿ ಸಾರಿಗೆ ಸುರಕ್ಷಾ ಬಸ್ ಗೆ ಗ್ರಾಮಸ್ತರೊಂದಿಗೆ ಸ್ವಾಗತಿಸಿ ಮಾತಾನಾಡಿದರು.
ಸಂಘಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಸುಮಾರು 67 ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿ ಕೊಂಡರು.
ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟಿಯಪ್ಪ ಪೂಜಾರಿ, ವಿದ್ಯಾ ಪ್ರಭು, ಹೇಮಲತಾ ನಾಯ್ಕ್,ಗಣ್ಯರಾದ ಸುಭ್ರಮಣ್ಯ ಪಾವನಾಸ್ಕರ್ ದೋಟ, ತೇಜಸ್ ಕರ್ಪೆ, ಸದಾನಂದ ಕರ್ಪೆ,ವಸಂತ ಪ್ರಭು,ತಮ್ಮಯ್ಯ ನಾಯ್ಕ, ಜಯಂತಿ, ಚಂದ್ರಾವತಿ, ಪುಷ್ಪ, ಆಶಾ ಕಾರ್ಯಕರ್ತೆ ಭಾನುಮತಿ, ಆರೋಗ್ಯ ಸೇವೆಯ ಸಿಬ್ಬಂದಿಗಳು,
ನವೀನ್ ಪೂಜಾರಿ ಹೊಸವಕ್ಳು, ಹರೀಶ್ ಶೆಟ್ಟಿ ಬೆಟ್ಟು, ಗಂಗಾಧರ್ ಮಂದಿರ, ರಾಜೇಂದ್ರ ಪೂಜಾರಿ ನೆಕ್ಲಾಜೆ ಮೊದಲಾದವರಿದ್ದರು.