ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಚೆನ್ನೈತ್ತೋಡಿ ಶಾಲೆಯ ಆರು ವಿದ್ಯಾರ್ಥಿಗಳು ಉತ್ತೀರ್ಣ

ಯುವಧ್ವನಿ ನ್ಯೂಸ್

ವಾಮದಪದವು: ಚೆನ್ನೈತೋಡಿ ದ.ಕ.ಜಿ.ಪಂ. ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 6 ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿದ್ದಾರೆ. ಪವನ್, ಪ್ರತೀಕ್ಷಾ, ಸಾಕ್ಷಿ, ಪ್ರಗತಿ, ವೈಭವಿ ಮತ್ತು ಚೈತ್ರಾ ಆಯ್ಕೆಗೊಂಡವರು ಎಂದು ಶಾಲೆ ಪ್ರಕಟಣೆ ತಿಳಿಸಿದೆ.