ಮಂಗಳೂರಿನ ಸಾಕ್ಷಾತ್ ಶೆಟ್ಟಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

YOUTH ACHEIVER

ಮಂಗಳೂರು: ಇಂಟರ್ನೆಷನಲ್ ಐಕಾನಿಕ್ ಅವಾರ್ಡ್ಸ್
ಅವರು ಕೊಡಮಾಡುವ ಸೀಝನ್ 7 ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನಾರ್ ಪ್ರಶಸ್ತಿಗೆ ಮಂಗಳೂರಿನ ಉತ್ಸಾಹಿ ಯುವನಾಯಕ, ನೇರಮಾರುಕಟ್ಟೆಯ ಯಶಸ್ವಿ ಉಧ್ಯಮಿ ಸಾಕ್ಷಾತ್ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ.

ಆಗಸ್ಟ್ 16 ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಸಾಕ್ಷಾತ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ರಾಜ್ಯದ ಡೈರೆಕ್ಟ್ ಸೆಲ್ಲಿಂಗ್ ಕ್ಷೇತ್ರದ ಉದ್ಯೋಗಿಗಳ ಆಶಾಕಿರಣವಾಗಿ ಮೂಡಿಬಂದಿದ್ದಾರೆ.

ಡೈರೆಕ್ಟ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಳೆದ 14 ವರ್ಷಗಳಿಂದ ತೊಡಗಿಸಿಕೊಂಡಿರುವ ಸಾಕ್ಷಾತ್ ಶೆಟ್ಟಿ ಅವರು ಅದೆಷ್ಟೋ ಯುವಜನತೆಯ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಇವರು ಪ್ರಸ್ತುತ ಡುಕ್ಸ್ ಎಂಜ್ ಪ್ರೈವೇಟ್ ಲಿಮಿಟೆಡ್ ನ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.

ತನ್ನ ವಿಶೇಷವಾದ ಕರ್ತವ್ಯ ದಕ್ಷತೆ, ಸೇವಾ ನಿಷ್ಠತೆ, ಸರಳ ಸನ್ನಡತೆ, ಉತ್ತಮ ನಾಯಕತ್ವ, ಸಂಘಟನಾ ಚತುರತೆಯ ಮೂಲಕ ನೇರ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಸಾಕ್ಷಾತ್ ಶೆಟ್ಟಿ ಅವರು ಛಾಲೆಂಜರ್ಸ್ ಫೌಂಡೇಶನ್ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಸೇವೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ನೇರ ಮಾರುಕಟ್ಟೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಇದೀಗ ಪ್ರಶಸ್ತಿ ಪುರಸ್ಕ್ರತರಾಗುವ ಮೂಲಕ ಯುವಸಮುದಾಯಕ್ಕೆ ಮಾದರಿಯಾಗಿದ್ದಾರೆ.