ಉಸಿರು ನಿಂತರೂ ಹೆಸರು ಅಜರಾಮರ ಹೇಡಿಗಳ ಅಸೂಯೆಗೆ ಬಲಿಯಾದರೇ ಕಿಶನ್ ಹೆಗ್ಡೆ

ಹಿರಿಯಡ್ಕದಲ್ಲಿ ಇತ್ತೀಚೆಗೆ ಕೊಲೆಯಾದ ಕಿಶನ್ ಹೆಗ್ಡೆಯನ್ನು ರೌಡಿಶೀಟರ್ ಎಂದು ಬಿಂಬಿಸುತ್ತಿರುವ ಹಿಂದಿರುವ ಷಡ್ಯಂತ್ರವಾದರೂ ಏನು? ಕಿಶನ್ ಹೆಗ್ಡೆ ಮಾಡಿರುವ ಅಪರಾದವಾದರೂ ಏನು? ಸಾಲ ಮಾಡಿದ್ದರು, ಸಮಾಜಮುಖಿಯಾಗಿ ಬೆಳೆಯುತ್ತಿದ್ದರು ಎಂಬ ಕಾರಣಕ್ಕೆ ಅವರು ರೌಡಿಶೀಟರೇ? ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳೆಯುತ್ತಿರುವ ಒಬ್ಬ ಉತ್ಸಾಹಿ, ಸಜ್ಜನ ಯುವ ನಾಯಕನನ್ನು ಕೇವಲ ಹಣದಾಸೆಗೋ, ಅಸೂಯೆಗೆ ಕದ್ದುಮುಚ್ಚಿ ಕೊಲೆಗೈಯ್ಯುವುದೆಂದರೆ ಇವರೆಂತಹ ಹೇಡಿಗಳು, ಇವರೆಂತಹ ರೌಡಿಗಳು? ಇತ್ಯಾದಿ ನೂರಾರು ಪ್ರಶ್ನೆಗಳು ಇದೀಗ ಪರಿಸರದ ಜನತೆಯನ್ನು ಕಾಡತೊಡಗಿದೆ…

ಮಂಗಳೂರು: ಇತ್ತೀಚೆಗೆ ಹಿರಿಯಡ್ಕದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಕಿಶನ್ ಹೆಗ್ಡೆಯವರನ್ನು ರೌಡಿಶೀಟರ್ ಎಂದು ಬಿಂಬಿಸುತ್ತಿರುವ ಹಿಂದಿರುವ ಷಡ್ಯಂತ್ರವಾದರೂ ಏನು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರನ್ನು ಬಲವಾಗಿ ಕಾಡತೊಡಗಿದೆ. ಕೊಲೆಗೀಡಾದ ನಿರಾಪರಾಧಿ ವ್ಯಕ್ತಿಯೊರ್ವರನ್ನು ರೌಡಿಶೀಟರ್ ಎಂದು ಬಿಂಬಿಸುತ್ತಾ ಸಾರ್ವಜನಿಕ ವಲಯದಲ್ಲಿ ಕೆಟ್ಟ ಹೆಸರು ಹರಡಿಸುವ ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಇಂತಹ ಷಡ್ಯಂತ್ರದ ವಿರುದ್ಧ ಕಿಶನ್ ಹೆಗ್ಡೆ ಅಭಿಮಾನಿ ಬಳಗ ಬೀದಿಗಿಳಿದು ಪ್ರತಿಭಟನೆ ನಡೆಸಲು ಯೋಜನೆ ರೂಪಿಸುತ್ತಿದೆ.

ಕಿಶನ್ ಹೆಗ್ಡೆ ಎಂಬ ಬಹುಮುಖಿ ವ್ಯಕ್ತಿತ್ವ
ಕಿಶನ್ ಹೆಗ್ಡೆ ಎಂದರೆ ಯಾರು? ಅವರ ವ್ಯಕ್ತಿತ್ವ, ಸೇವಾದಕ್ಷತೆ, ಪರೋಪಕಾರತೆ, ಪ್ರಾಮಾಣಿಕತೆಯ ಆಳ- ವಿಸ್ತಾರ ಎಷ್ಟು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗಷ್ಟೇ ಗೊತ್ತಿದೆ. ಅದನ್ನು ತಿಳಿಯದೆ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವುದು ಹೇಡಿಗಳ ನಾಚಿಗೆಗೇಡಿತನದ ಕಾರ್ಯ ಎಂದು ಕಿಶನ್ ಹೆಗ್ಡೆ ಅಭಿಮಾನ ಬಳಗ ಟೀಕಿಸಿದ್ದು ಕಿಶನ್ ಹೆಗ್ಡೆಯವರ ನಿಸ್ವಾರ್ಥ ಸಮಾಜಮುಖಿ ಕಾರ್ಯಗಳನ್ನು ಸಹಿಸಲಾಗದೆ ಇಂತಹ ಹೇಯಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಟ್ಟಾ ಆರ್ ಎಸ್ ಎಸ್:
ಹೌದು..ಕಿಶನ್ ಹೆಗ್ಡೆ ಕಟ್ಟಾ RSS ಕಾರ್ಯಕರ್ತರು. 1997ರಲ್ಲಿ ITC ತರಬೇತಿ ಮುಗಿಸಿ ಗ್ರಾಮದಲ್ಲಿ ಸಂಘದ ಶಾಖೆಗಳನ್ನು ಆರಂಭಿಸಲು ಪ್ರೇರಣೆ ನೀಡಿದವರು, ಆ ಮೂಲಕ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡವರು.
ತನ್ನ ಗ್ರಾಮ ಮಾತ್ರವಲ್ಲ, ತಾಲೂಕು ಮಟ್ಟದಲ್ಲೂ ಬಿಜೆಪಿ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸಿದವರು. ವಿಶ್ವ ಹಿಂದೂ ಪರಿಷತ್, ಭಜರಂಗದಳವನ್ನು ಬಲಾಢ್ಯವಾಗಿ ಸಂಘಟಿಸಿದವರು. ಧರ್ಮ, ಸಮಾಜ, ಸಂಘಟನೆ, ಪಕ್ಷ, ಯುವ ಸಂಘಟನೆ, ಸಾಮಾಜಿಕ ಕಾರ್ಯ …ಈ ರೀತಿ ಎಲ್ಲಾ ಕ್ಷೇತ್ರದಲ್ಲಿ ಉತ್ಸಾಹಿ ಯುವನಾಯಕನಾಗಿ, ಸ್ವಾರ್ಥರಹಿತ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದ ಕಿಶನ್ ಹೆಗ್ಡೆಯ ಸಾವು ನ್ಯಾಯೋಚಿತವೇ? ಸತ್ತ ಮೇಲೂ ಅವರ ಹೆಸರನ್ನು ಕೆಡಿಸುವ ನೀಚತನ ಶೋಭೆಯೇ ಎಂದು ಹೆಗ್ಡೆ ಅಭಿಮಾನಿ ಬಳಗ ಪ್ರಶ್ನಿಸುತ್ತಿದೆ.

ಧಾರ್ಮಿಕ ನೇತಾರ
ಹೇಳಿ ಕೇಳಿ ಕಿಶನ್ ಹೆಗ್ಡೆ ಧರ್ಮಾರಾಧಕ, ದೈವಭಕ್ತ, ಧಾರ್ಮಿಕ ನೇತಾರ. ದೇವರು, ದೈವ, ಪೂಜೆ, ಪುರಸ್ಕಾರ, ಉತ್ಸವದ ಗುಂಗಿನಲ್ಲೇ ಮೈಮರೆಯುತ್ತಿದ್ದ ಕಿಶನ್ ಹೆಗ್ಡೆ ಯಾವತ್ತೂ ಇನ್ನೊಬ್ಬರಿಗೆ ದ್ವೇಷ ಬಗೆದವರಲ್ಲ, ತನ್ನ ಶತ್ರುಗಳಿಗೂ ಒಳಿತನ್ನೇ ಬಯಸಿದವರು, ಒಳಿತನ್ನೇ ಮಾಡಿದವರು. ಇಂತಹ ವ್ಯಕ್ತಿಗೆ ರೌಡಿ ಎಂಬ ಪ್ರಮಾಣಪತ್ರವೇ…? ಈ ಪ್ರಮಾಣ ಪತ್ರ ನೀಡಲು ಯಾರ ಜೇಬಿಗೆ ಎಷ್ಟು ಸೇರಿದೆ? ಸಾರ್ವಜನಿಕವಾಗಿ ಉತ್ತರಿಸಿ ಎನ್ನುವುದು ಹೆಗ್ಡೆ ಅಭಿಮಾನಿ ಬಳಗದ ಸವಾಲು.

ನಿಜಕ್ಕೂ ರೌಡಿ ಯಾರು?

ಕಿಶನ್ ಹೆಗ್ಡೆಯ ಪ್ರಭಾವದಿಂದಲೇ ಬೆಳೆದ ಮನೋಜ್ ಇಂದು ಹಣದಾಸೆಗಾಗಿ ಮತ್ತು ಅಸೂಯೆಗಾಗಿ ತನ್ನ ಸ್ನೇಹಿತನನ್ನೇ ಬಲಿತೆಗೆದುಕೊಂಡದ್ದು ದುರಂತವೆನ್ನುತ್ತಾರೆ ನಾಗರಿಕರು.
ಒಂದೊಮ್ಮೆ ಸಂಘಟನೆ ಯಲ್ಲಿ ಮೂಲೆ ಗುಂಪಾಗಿದ್ದ ಮನೋಜ ನಿಗೆ ಹೆಜ್ಜೆ ಹೆಜ್ಜೆ ಗೂ ಆಸರೆ ಎಂಬಂತೆ ಇದ್ದದ್ದು ಇದೇ ಕಿಶನ್ ಹೆಗ್ಡೆ. ಸಹೋದರ ರಂತೆ ಸ್ನೇಹವಿರಿಸಿ ಕೊಂಡಿದ್ದ ಈ ಇಬ್ಬರ ಮಧ್ಯೆ ಅದೆಷ್ಟೋ ವ್ಯವಹಾರಗಳು ನಡೆಯುತ್ತಿತ್ತು, ವ್ಯವಹಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ವಾದ ವಿವಾದಗಳು ನಡೆಯುತ್ತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರೌಡಿಶೀಟರ್, ಗೂಂಡಾ ಕಾಯ್ದೆ, ಜೈಲುವಾಸ, ನಾಪತ್ತೆ…ಈ ರೀತಿ ಅಪರಾಧ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಕಾಣುತ್ತಿದ್ದ ಮನೋಜ್ ನನ್ನು ಅಪಾಯಕಾರಿ ಸನ್ನಿವೇಶದಲ್ಲೆಲ್ಲ ಬಚಾವು ಮಾಡಿ ರಕ್ಷಣೆ ನೀಡಿದವರು ಇದೇ ಕಿಶನ್ ಹೆಗ್ಡೆ.

ಹೆಗ್ಡೆ ಮಾಡಿದ ತಪ್ಪೇನು?

ಅಸಲಿಗೆ ಹೆಗ್ಡೆ ಕಷ್ಟ ಕಾಲದಲ್ಲಿ ಮನೋಜನಿಂದ ತೆಗೆದುಕೊಂಡಿದ್ದ ಸಾಲ 40 ಲಕ್ಷ. ಆದರೆ ಬಡ್ಡಿಯ ರೂಪದಲ್ಲಿ ವಾಪಾಸು ನೀಡಿದ ಹಣ 1 ಕೋಟಿಗೂ ಅಧಿಕ.ಬಡ್ಡಿ ವ್ಯವಹಾರದಲ್ಲೇ ದಿನ ಕಳೆಯುತ್ತಿದ್ದ ಮನೋಜ ತನ್ನ ಬಳಿ ಸಾಲ ತೆಗೆದು ಕೊಂಡವರ ಜೊತೆ ಬಹಳ ಕ್ರೂರ ರೀತಿಯಲ್ಲಿ ವರ್ತಿಸುತ್ತಿದ್ದದ್ದು, ಬಡ್ಡಿಗಾಗಿ ದಾದಾಗಿರಿ ಮಾಡುತ್ತಿದ್ದದ್ದು ಸಮಾಜಕ್ಕೆ ಗೊತ್ತಿರುವಂತದ್ದೆ. ಯಾವಾಗ ಅಸಹಾಯಕರು ಹಣ ವಾಪಸು ನೀಡಲು ಅಶಕ್ತರಾದರೋ ಅವರು ಎಲ್ಲರೂ ಮೊರೆ ಹೋದದ್ದು ಹೆಗ್ಡೆ ಹತ್ತಿರ. ಗೆಳೆಯನ ಬಳಿ ಮಾತನಾಡುವಂತೆ ಹೇಳಿದಾಗ ಹೆಗ್ಡೆ ಮನೋಜನ ಹತ್ತಿರ ಅವರ ಪರವಾಗಿ ಸಂಧಾನಕ್ಕೆ ಮುಂದಾದರು. ಯಾವಾಗ ತನ್ನ ಸಾಲಗಾರರು ಹೆಗ್ಡೆಯ ಹೆಸರು ಹೇಳಿ ಹಣ ವಾಪಸು ನೀಡಲು ಹಿಂದೇಟು ಹಾಕಿದರೋ ಆಗಲೇ ಮನೋಜನಿಗೆ ಹೆಗ್ಡೆಯ ಮೇಲೆ ದ್ವೇಷ ಆರಂಭಗೊಂಡದ್ದು. ಮೊದಲಿಗೆ ನಯವಾಗಿ ಶುರುವಾದ ವಾಗ್ವಾದ ನಂತರ ಗೆಳೆತನ ಮುರಿದು ಕೊಳ್ಳುವಷ್ಟು ಏರಿತು. ಯಾವಾಗ ಹೆಗ್ಡೆ ಮನೋಜನ ಗೆಳೆತನ ಮುರಿದುಕೊಂಡನೋ ಮನೋಜನ ಬೆಂಬಲಿಗರು ಮತ್ತು ವಿರೋಧಿಗಳೂ ಹೆಗ್ಡೆಯ ತಂಡ ಸೇರಿದರು. ಹೆಗ್ಡೆಯ ತಂಡ ತುಂಬಾ ದೊಡ್ಡ ದಾಗಿ ಬೆಳೆಯಿತು..ಇದೇ ಮನೋಜನ ಎದೆಯಲ್ಲಿ ನಡುಕ ಹುಟ್ಟಲು ಕಾರಣವೆನ್ನುತ್ತಾರೆ ಸ್ಥಳೀಯ ನಿವಾಸಿಗಳು.
ತನಗಿಂತ ವಯಸ್ಸಿನಲ್ಲಿ ಚಿಕ್ಕದಾದ ಹೆಗ್ಡೆ 35ರ ಹರೆಯದಲ್ಲೇ ತನಗೆ ಎದುರಾಗಿ ಜಿಲ್ಲೆಯಲ್ಲಿ ನಾಯಕನಾಗಿ ಬೆಳೆಯುತ್ತಿರುವುದು ಮನೋಜನಿಗೆ ಸಹಿಸಲಾಗಲಿಲ್ಲ.
ಹೆಗ್ಡೆ ಮನೊಜನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದ ಎಂಬುದೆಲ್ಲ ಹೇಡಿಗಳು ಸೃಷ್ಠಿಸಿದ ಕಟ್ಟುಕತೆ ಎನ್ನುವ ಸತ್ಯ ಜಿಲ್ಲೆಯ ಜನತೆಗೆ ಗೊತ್ತಿದೆ ಎನ್ನುತ್ತಾರೆ ಕಿಶನ್ ಹೆಗ್ಡೆ ಅಭಿಮಾನಿಗಳು.

ಅಪರಾಧಿ ಪಟ್ಟವೇಕೇ

ಹೆಗ್ಡೆ ಯಾವತ್ತೂ ಹಣಕ್ಕಾಗಿ ಯಾರನ್ನೂ ಪೀಡಿಸಿದವರಲ್ಲ. ಇತರರ ಬಳಿ ಕೈ ಚಾಚಿದವರಲ್ಲ. ಸ್ವಾಭಿಮಾನಿಯಾಗಿ ಬದುಕುತ್ತಾ ಕೈಲಾದಷ್ಟು ಕೊಟ್ಟು ಬಿಡುವ ಸಹೃದಯರು. ಅದಕ್ಕೆ ಅವರ ಹಿಂದಿರುವ ಅಪಾರ ಅಭಿಮಾನಿ ಬಳಗವೇ ಸಾಕ್ಷಿ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಹೋರಾಡಿ ತನ್ನ ಮೇಲೆಯೇ ಕೇಸು ದಾಖಲಾದ ನಿದರ್ಶನಗಳೇ ಹೆಚ್ಚು. ಇಂತಹ ಸರಳ ಸಜ್ಜನಿಕೆಯ ಸಹೃದಯಿ ವ್ಯಕ್ತಿಯೊರ್ವನ ಏಳಿಗೆಯನ್ನು ಸಹಿಸಲಾಗದೇ ಬಲಿತೆಗೆದುಕೊಂಡದ್ದಲ್ಲದೆ ರೌಡಿಶೀಟರ್ ಎಂದು ಬಿಂಬಿಸಹೊರಟಿರುವುದು ಆತ್ಮಸಾಕ್ಷಿಗೆ ಮಾಡುವ ದ್ರೋಹವಲ್ಲದೇ ಮತ್ತೇನು? ಇಂತಹವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಿಶನ್ ಹೆಗ್ಡೆ ಅಭಿಮಾನಿ ಬಳಗ ಆಗ್ರಹಿಸಿದೆ.