ಕಾರಂಬಡೆ: ತೀರ್ಥಭಾವಿಗೆ ಅಪರೂಪದ ಮರದ ಅಲಗೆ


ಬಂಟ್ವಾಳ: ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬ ಪ್ರಕೃತಿ ರಮಣೀಯ ಪರಿಸರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾರಂಬಡೆ ಶ್ರೀ ಮಹಾಮ್ಮಾಯಿ‌ ಕ್ಷೇತ್ರದ ತೀರ್ಥಭಾವಿಯ ಕಟ್ಟೆಗೆ ತೀರಾ ಅಪರೂಪ ಎಂಬಂತಹ ವಿಶಾಲ ರಕ್ತ ನೆಲ್ಲಿ ಮರದ ಅಲಗೆಯನ್ನು ಹಾಕಲಾಗಿದೆ.


ವಿಶೇಷವೆಂದರೆ ಈ ಬೃಹತ್ ಗಾತ್ರದ ಮರ ಸುಮಾರು ಮುನ್ನೂರು ವರ್ಷಗಳ ಹಳೆಯದಾಗಿದ್ದು 14 ಫೀಟ್ ಉದ್ದ, 4.5 ಫೀಟ್ ಅಗಲವಿತ್ತು. ಈ ಮರವನ್ನು ನೋಡುವುದೇ ಒಂದು ಅಪೂರ್ವ ಅವಕಾಶವಾಗಿದ್ದು ಭಕ್ತರೊಬ್ಬರು ಈ ಮರವನ್ನು ಕ್ಷೇತ್ರಕ್ಕೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.