ಕಾಯರ್ ಪಲ್ಕೆ ಹೆಗ್ಡೇಸ್ ಸ್ಕೂಲ್ ವಾರ್ಷಿಕೋತ್ಸವ

ಬಂಟ್ವಾಳ: ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವುದರ ಮೂಲಕ ಅವರ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಯರ್ ಪಲ್ಕೆ ಹೆಗ್ಡೇಸ್ ಸ್ಕೂಲಿನ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಡಾ.ಶಿವಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಕಾಯರ್ ಪಲ್ಕೆ ಹೆಗ್ಡೇಸ್ ಖಾಸಗಿ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಸಂಚಾಲಕಿ ಪ್ರೀತಿ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಎ.ರೈ, ಪತ್ರಕರ್ತ ಎ.ಗೋಪಾಲ ಅಂಚನ್ ಪ್ರಧಾನ ಭಾಷಣ ಮಾಡಿದರು.


ಬಿ.ಸಿ.ರೋಡು ಬೆಸ್ಟ್ ಸ್ಕೂಲ್ ಆಡಳಿತಾಧಿಕಾರಿ ಮಹಾಬಲ ಆಳ್ವ, ತಾಲೂಕು ಪಂಚಾಯತು ಸದಸ್ಯೆ ಸ್ವಪ್ನ ವಿಶ್ವನಾಥ ಪೂಜಾರಿ, ಪಂಚಾಯತು ಅಧ್ಯಕ್ಷರುಗಳಾದ ಲೀಲಾವತಿ ಧರ್ಣಪ್ಪ ಪೂಜಾರಿ, ಗೀತಾ ಶ್ರೀಧರ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದರು.
ಶಾಲಾ ಆಡಳಿತಾಧಿಕಾರಿ ಪ್ರಕಾಶ್ ಹೆಗ್ಡೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಾಸುದೇವ ಪ್ರಭು, ಉಪಾಧ್ಯಕ್ಷರಾದ ಶಂಕರನಾರಾಯಣ ಹೊಳ್ಳ, ಮಾಯಾ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಸಲಹೆಗಾರ ಬಿ.ರಾಮಚಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಶಾಲಾ ಸಲಹೆಗಾರ ಆದಿರಾಜ್ ಜೈನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಉಷಾ ಮನೋಜ್ ವರದಿ ವಾಚಿಸಿದರು.