ರೈತರಿಗೆ ಮಹಾದ್ರೋಹವೆಸಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ-ಕರ್ನಾಟಕ ರಾಜ್ಯ ರೈತ ಸಂಘ ಮನವಿ

ಬಂಟ್ವಾಳ: ಈ ಚುನಾವಣೆ ರೈತರ ಪಾಲಿಗೆ ಮಹತ್ವದ ಚುನಾವಣೆ. ಬಿಜೆಪಿ ಸರಕಾರ ರೈತರಿಗೆ ಮಹಾದ್ರೋಹವೆಸಗಿದ್ದು ಎಲ್ಲಾ ರೈತರು ಸಂಘಟಿತರಾಗಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕಾಗಿದೆ. ಕಂಪನಿಗಳ ಪರವಾಗಿ, ರೈತರ ವಿರುದ್ಧವಾಗಿ ಕೆಲಸ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ಹೇಳಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರದ ನೀತಿಯಿಂದ ಎಲ್ಲಾ ರೈತರಿಗೂ ಅನ್ಯಾಯವಾಗಿದೆ. ಅದ್ದರಿಂದ ಈ ಬಾರಿ ಬಿಜೆಪಿಯನ್ನು ಸೋಲಿಸಬಲ್ಲ ಪಕ್ಷಕ್ಕೆ ಮತ ಹಾಕಬೇಕಾಗಿದೆ ಎಂದರು.

ಕೋಮುವಾದ ಸೋಲಿಸಿ, ಕರ್ನಾಟಕ ಉಳಿಸಿ-ಸಿಪಿಐಎಂ ಎಲ್ ಮನವಿ:

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಕೋಮುವಾದಿ ಪಕ್ಷವನ್ನು ರೈತರಿಗೆ ಮಹಾದ್ರೋಹವೆಸಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ-ಕರ್ನಾಟಕ ರಾಜ್ಯ ರೈತ ಸಂಘ ಮನವಿ ಎಂದು ಸಿಪಿಐಎಂಎಲ್ ಮನವಿ ಮಾಡಿದೆ.

ಬಿಜೆಪಿಯ ದುರಾಡಳಿತದಿಂದ ಕರ್ನಾಟಕವನ್ನು ಉಳಿಸಬೇಕಾಗಿದೆ. ಹಿಂದೆಂದೂ ಇಲ್ಲದಂತಹ ಭ್ರಷ್ಟಾಚಾರ, ಮಿತಿ ಮೀರಿದ ಬೆಲೆಯೇರಿಕೆ, ಕಾರ್ಮಿಕ ವಿರೋಧಿ ನೀತಿಗಳು, ಹೆಚ್ಚುತ್ತಿರುವ ನಿರುದ್ಯೋಗ, ಸಂಕಷ್ಟದಲ್ಲಿರುವ ಮಾರುಕಟ್ಟೆ, ಕುಸಿದಿರುವ ಆರ್ಥಿಕತೆ, ಗಗನಕ್ಕೇರಿದ ಸಾಲ, ಮಹಿಳಾ ದೌರ್ಜನ್ಯಗಳು, ಜಾತಿ ದೌರ್ಜನ್ಯಗಳು, ಕೋಮುವಾದ, ರೈತ ವಿರೋದಿ ನೀತಿಗಳಿಂದ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಅದ್ದರಿಂದ ಈ ಬಾರಿ ಜನತೆ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಪಕ್ಷ ಸಂಘಟನೆಯ ಮುಖಂಡರು ವಿನಂತಿಸಿದರು.

ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್, ಸಿಪಿಐಎಂಎಲ್ ತಾಲೂಕು ಮುಖಂಡ ತುಳಸೀದಾಸ್ ಆರ್. ಸುದ್ದಿಗೋಷ್ಠಿಯಲ್ಲಿದ್ದರು.