ರಮಾನಾಥ ರೈ ವಿರುದ್ಧದ ಅಪಪ್ರಚಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಬೇಕು-ಪ್ರಜಾಧ್ವನಿ ಯಾತ್ರೆಯಲ್ಲಿ ಸವಿತಾ ರಮೇಶ್ ಕರೆ

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈಯವರು ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ ಮಾಡಿದ್ದಾರೆ.
ರೈಗಳ ಸಾಧನೆಯ ಪಟ್ಟಿ ಭಾಷಣದಲ್ಲಿ ಉಲ್ಲೇಖಿಸಲು ಮಾತ್ರ ಸೀಮಿತವಾಗಬಾರದು, ಅದನ್ನು ಜನತೆಗೆ ತಲುಪಿಸುವ ಕಾರ್ಯ ನಡೆಯಬೇಕು. ಅವರ ವಿರುದ್ದ ನಡೆಯುವ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಕರೆ ನೀಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಶತಸ್ಸಿದ್ದ. ಈ ಕ್ಷೇತ್ರದ, ಈ ಜಿಲ್ಲೆಯ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೈಗಳು ಆ ಸರಕಾರದಲ್ಲಿ ಮಂತ್ರಿಯಾಗಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಜವಾಬ್ದಾರಿ ಅರಿತುಕೊಂಡು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡಾ ಆಹೋರಾತ್ರಿ ಶ್ರಮಿಸಬೇಕಾಗಿದೆ. ಬಿಜೆಪಿ ಸರಕಾರದ ಅವೈಜ್ಞಾನಿಕ ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ. ಅದನ್ನು ಸರಕಾರ ಬಂದ ತಕ್ಷಣ ಈಡೇರಿಸುವ ಮೂಲಕ ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಸ್ಪಂದಿಸಲಿದೆ ಎಂದು ಸವಿತಾ ರಮೇಶ್ ಭರವಸೆ ನೀಡಿದರು.

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ ಅಂಗವಾಗಿ ಕುಕ್ಕಾಜೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ  ಅವರು,  ಆರೆಸ್ಸೆಸ್ ಪ್ರೇರಿತ ಕೋಮುವಾದ ಹೊರಗಿಟ್ಟು ಬಿಜೆಪಿ ನಾಯಕರು ತಾಕತ್ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಹೇಳಿ ಮತ ಪಡೆಯಲಿ ಎಂದು ಸವಾಲೆಸೆದರು.

ಕಾಂಗ್ರೆಸ್ ಬಡವರಿಗೆ ಯೋಜನೆ ಪ್ರಕಟಿಸಿದರೆ, ಅದಕ್ಕೆ ದುಡ್ಡು ಹೊಂದಿಸುವ ಚಿಂತೆ ಮಾತ್ರ ಬಿಜೆಪಿಗೆ : ರೈ ಲೇವಡಿ

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ನಾನು ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಬೇನಾವಿ ಆಸ್ತಿ-ಅಂತಸ್ತು ಸಂಪಾದಿಸಿಲ್ಲ. ಕ್ಷೇತ್ರದ ಜನರ ಪ್ರೀತಿ ಸ್ನೇಹವೇ ನಾನು ಸಂಪಾದಿಸಿದ ಆಸ್ತಿ ಎಂದರಲ್ಲದೆ ಬಡವರಿಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ದುಡ್ಡು ಹೇಗೆ ಹೊಂದಿಸುತ್ತಾರೆ ಎಂಬ ಚಿಂತೆ ಬಿಜೆಪಿಗರಿಗೆ. ನಮ್ಮ ಆಶ್ವಾಸನೆ ಏನಿದ್ದರೂ ಈಡೇರಿಸುವಂತದ್ದು ಮಾತ್ರ. ಬಿಜೆಪಿಯ ಹದಿನೈದು ಲಕ್ಷ, ಕಪ್ಪುಹಣ ತರುವಂತಹ ಆಕಾಶಕ್ಕೆ ಏಣಿ ಇಡುವ ಯಾವುದೇ ಭರವಸೆ ಕಾಂಗ್ರೆಸ್ ಪಕ್ಷ ನೀಡುವುದಿಲ್ಲ. ಈ ಬಗ್ಗೆ ಯಾರಿಗೂ ಚಿಂತೆ ಬೇಡ ಎಂದರು.
ಬಡವರ ಮಕ್ಕಳನ್ನು ಕೂಡಾ ಇಂಜಿನಿಯರ್ ಡಾಕ್ಟರ್ ಮಾಡುವ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಸಿಇಟಿ ಜಾರಿಗೆ ತರುವ ಮೂಲಕ. ರೈತರಿಗೆ ಉಚಿತ ವಿದ್ಯುತ್, ಸಾಲಮನ್ನಾ ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದ್ದು, ಸಿದ್ದು ಸರಕಾರದ ಯುಗ ಕರ್ನಾಟಕದ ಸುವರ್ಣ ಯುಗ ಎಂದು ಬಣ್ಣಿಸಿದರು. 
ನಾನೇನಾದರೂ ರಾಜಕೀಯದಲ್ಲಿ ಕೋಟ್ಯಂತರ ರೂಪಾಯಿ ಹಣ ಮಾಡಿದ್ರೆ ನನಗೆ ಚುನಾವಣೆ ಕಷ್ಟವೇ ಇರಲಿಲ್ಲ. ಬೇಕಾ ಬಿಟ್ಟಿ ಹಣ ಹಂಚಿ ಚುನಾವಣೆ ಗೆಲ್ತಿದ್ದೆ. ಆದರೆ ಅದನ್ನು ನಾನು ಮಾಡಲಿಲ್ಲ. ಅದರಿಂದ ನನಗೆ ಹೃದಯ ಸಂತೋಷ ಇದೆ ಎಂದ ರಮಾನಾಥ ರೈ 94 ಸಿ ಹಕ್ಕುಪತ್ರ ರಾಜ್ಯದಲ್ಲೇ ಮೊದಲ ಬಾರಿಗೆ ನೀಡಿದ್ದು ಬಂಟ್ವಾಳದಲ್ಲಿ. ಕಮಿಷನ್ ಪರ್ಸೆಂಟೇಜ್ ರಾಜಕೀಯ ನಾನು ಯಾವತ್ತೂ ಮಾಡಿಲ್ಲ. ಜನಸೇವೆಯ ರಾಜಕೀಯ ಮಾತ್ರ ಮಾಡಿದ್ದೇನೆ. ಇದನ್ನು ಹೃದಯಮುಟ್ಟಿ ನೆನಪಿಸಿ ನನ್ನ ಈ ಒಂದು ಕೊನೆಯ ಚುನಾವಣೆಯಲ್ಲಿ ಈ ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. 

ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಅಬ್ದುಲ್ ರಹಿಮಾನ್, ಜಿಎಂ ಇಬ್ರಾಹಿಂ, ಬದ್ರುದ್ದೀನ್, ಅಬ್ದುಲ್ ಅಝೀಝ್  ಮೊಹಮ್ಮದ್, ವಿಶ್ವನಾಥ್ ನಾಯ್ಕ್, ಗೋಪಾಲ್ ಕಂಚೀಲ, ಪದ್ಮನಾಭ ಕಂಚೀಲ, ಬಿ ಉಮ್ಮರ್, ಈಶ್ವರ್ ನಾಯ್ಕ್, ಅಬೂಬಕರ್ ನಿರ್ಬಿಲ್, ಅನಂತ್ ಪ್ರಭು, ಗಣೇಶ್ ಪ್ರಭು, ಹನೀಫ್ ಟಿಂಬರ್, ಶೇರೀಫ್ ಬಾಬುಕೊಡಿ, ಶೇರೀಫ್ ಕಲ್ಲಮರ್, ನೌಫಾಲ್ ನಾಡಾಜೆ, ಕೆ. ಪಿ ಅಬ್ದುಲ್ ರಹಿಮಾನ್,  ಅಬ್ದುಲ್ ಮಜೀದ್, ಕೆ. ಪಿ ಗಂಗಾಧರ್, ಸತ್ತಾರ್, ಅಬ್ದುಲ್ ಖಾದರ್ ದೇಲಂತಬೆಟ್ಟು, ಗಣೇಶ್ ಭಟ್,  ರೇಖಾ ರಮೇಶ್, ಇಬ್ರಾಹಿಂ ಖಲೀಲ್ ಮರಾಠಿಮೂಲೆ, ಇಬ್ರಾಹಿಂ ಕೊಣಲೆ, ರಾಜೇಶ್ ಡಿ ಸೋಜ ದೇಲಂತಬೆಟ್ಟು, ರಾಜೇಶ್ ಡಿ ಸೋಜ ಕೊಪ್ಪಳ, ಮೊಯಿದು ಕುಂಞ, ಮೊಯಿದು ಕುಂಞ ಬೈರಿಕಟ್ಟೆ,  ಕೃಷ್ಣ ನಾಯ್ಕ ಮರ್ತನಾಡಿ,ಆಶೀಪ್ ಬನಾರಿ, ಇಬ್ರಾಹಿಂ ಬೈರಿಕಟ್ಟೆ, ಬಿ. ಸಂದೇಶ ಶೆಟ್ಟಿ,  ಅಬ್ದುಲ್ಲಾ ಕುಕ್ಕಿಲ, ಅಬ್ದುಲ್ ರೆಹಮಾನ್ ಕಡಂಬು,  ಶರೀಫ್ ಕೊಡಂಗೆ, ಹರ್ಷದ್ ಕುಕ್ಕಿಲ,  ಸಿದ್ದಿಕ್ ಸರಾವ್, ತಮ್ಮಯ್ಯ ಗೌಡ, ಶೋಭಾ ರೈ, ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಅಬ್ದುಲ್ ರಝಾಕ್ ಕುಕ್ಕಾಜೆ, ಅರ್ಶದ್ ಸರವು, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಕೆ ಪದ್ಮನಾಭ ರೈ, ರಮೇಶ ಪಣೋಲಿಬೈಲು, ಪಿ ಎ. ರಹೀಂ ಬಿ ಸಿ ರೋಡು, ಸಿದ್ದೀಕ್ ಸರವು ಮೊದಲಾದವರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318