ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಅಭೂತಪೂರ್ವ ಜನಬೆಂಬಲ

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಆರಂಭಗೊಂಡ “ಬಂಟ್ವಾಳ ಪ್ರಜಾಧ್ವನಿ ಯಾತ್ರೆ” ಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ.
14 ದಿನಗಳ ಕಾಲ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಗೆ ಶುಕ್ರವಾರ ಬೆಳಿಗ್ಗೆ ಪುಂಚಮೆಯಲ್ಲಿ ಚಾಲನೆ ದೊರೆತಿದ್ದು ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ ಗ್ರಾಮದಲ್ಲಿ ಸಂಚರಿಸಿದ ಪ್ರಜಾಧ್ವನಿ ಯಾತ್ರೆ ಸಂಜೆ ವೇಳೆಗೆ ಬಡಕಬೈಲಿನಲ್ಲಿ ಸಮಾಪನಗೊಂಡಿದೆ. ಯಾತ್ರೆಯುದ್ದಕ್ಕೂ ಇಡೀ ದಿನ ಎಲ್ಲಾ ಕಡೆಗಳಲ್ಲಿಯೂ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು ಮೊದಲ ದಿನದ ಯಾತ್ರೆ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ.
ಬಂಟ್ವಾಳ ವೆಂಕಟರಮಣ ದೇವಸ್ಥಾನ, ಅಗ್ರಹಾರ ಚರ್ಚ್, ಬಂಟ್ವಾಳ ಕೆಳಗಿನ ಪೇಟೆ ಜುಮಾಮಸೀದಿ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ- ಪೂಜೆ ಸಲ್ಲಿಸಿ ಯಾತ್ರೆಯನ್ನು ಆರಂಭಿಸಲಾಗಿದೆ
.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪುಂಚಮೆಯಲ್ಲಿ ಯಾತ್ರೆಗೆ ಚಾಲನೆ ನೀಡಿದರು.
ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರ ಜೀವನ ಸಂಕಷ್ಟದಲ್ಲಿದೆ. ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ವಿಜೃಂಭಿಸುತ್ತಿದೆ. ಜನರ ಶ್ರೇಯೋಭಿವೃದ್ಧಿಗಾಗಿ ಏನನ್ನೂ ಮಾಡದ ಬಿಜೆಪಿ ಸರಕಾರ ಜನರಿಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ ಎಂದು ಆರೋಪಿಸಿದ ಹರೀಶ್ ಕುಮಾರ್
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ತಿಳಿಸಿದಂತೆ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 5000 ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ತನ್ನ ಅಧಿಕಾರಾವಧಿಯಲ್ಲಿ ಸಮಗ್ರ ಒಳಚರಂಡಿ ಯೋಜನೆ, ತಾಲೂಕು ಕ್ರೀಡಾಂಗಣ ಸಹಿತ ಹಲವಾರು ಶಾಶ್ಚತ ಅಭಿವೃದ್ಧಿ ಯೋಜನೆಗಳನ್ನು ಮಂಜೂರುಗೊಳಿಸಿದ್ದರೂ ಅದನಿನ್ನೂ ಪೂರ್ಣಗೊಳಿಸಲು ಬಿಜೆಪಿ ಶಾಸಕರಿಗೆ ಸಾಧ್ಯವಾಗಿಲ್ಲ ಎಂದು ದೂರಿದರು.
ಇಡೀ ರಾಜ್ಯದಲ್ಲಿ ಅತೀ ಹೆಚ್ಚು 94 ಸಿ.ಹಕ್ಕು ಪತ್ರ, ವಸತಿ ಯೋಜನೆಗಳು ಹಾಗೂ ಅತೀ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಬಂಟ್ವಾಳದಲ್ಲಿ ಅನುಷ್ಠಾನಗೊಳಿಸಲಾಗಿದೆ. ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ನಮ್ಮ ಅವಧಿಯಲ್ಲಿ ಮಂಜೂರು ಮಾಡಲಾಗಿದೆ. ಆದರೆ ಈಗಿನ ಅವಧಿಯಲ್ಲಿ ಆ ಯೋಜನೆಗಳನ್ನು ಮುಂದುವರಿಸಲು ಸಾಧ್ಯವಾಗದಿರುವುದು ಖೇದಕರ ಎಂದು ರಮಾನಾಥ ರೈ ಹೇಳಿದರು.


ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಯಾತ್ರೆಯ ಸಂಚಾಲಕ ಪಿಯೂಸ್ ಎಲ್ ರೊಡ್ರಿಗಸ್, ಪಕ್ಷದ ಪ್ರಮುಖರಾದ ಪೃಥ್ವಿ ರಾಜ್, ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಸುಭಾಶ್ಷಂದ್ರ ಶೆಟ್ಟಿ ಕುಲಾಲು, ಸುರೇಶ್ ಪೂಜಾರಿ ಜೋರ, ವಾಸು ಪೂಜಾರಿ ಲೊರೆಟ್ಟೊ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಗದೀಶ ಕೊಯಿಲ, ಮೋಹನ್ ಕಲ್ಮಂಜ, ಸಂಪತ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಮಧುಸೂಧನ ಶೆಣೈ, ಮಲ್ಲಿಕಾ ಶೆಟ್ಟಿ, ಚಂದ್ರಶೇಖರ ಪೂಜಾರಿ, ಚಂದ್ರಶೇಖರ ಭಂಡಾರಿ, ಸುಧಾಕರ ಶೆಣೈ ಖಂಡಿಗ, ಜಯಂತಿ ವಿ.ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಜಾಸ್ಮಿನ್, ಪ್ಲೋಸಿ ಡಿ.ಸೋಜ, ಮಲ್ಲಿಕಾ ಪಕಳ, ವೀಣಾ ಆಚಾರ್ಯ ಮೊದಲಾದವರಿದ್ದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318