ಆರೋಗ್ಯಕ್ಕೆ ಉಪಕಾರಿ, ಫಲಿತಾಂಶ ಪರಿಣಾಮಕಾರಿ- ಇಲ್ಲಿದೆ ಕರಿ ಜೀರಿಗೆಯ ಮಹತ್ವ

ಯುವಧ್ವನಿ-ಆರೋಗ್ಯ ದರ್ಶನ

ಮಂಗಳೂರು: ಆರೋಗ್ಯದ ದೃಷ್ಠಿಯಿಂದ
ಇದು ಬಹಳ ಒಳ್ಳೆಯದು. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಮ್​ನಂತಹ ಪೋಷಕಾಂಶಗಳಿಂದ ಕೂಡಿರುವ ಕಪ್ಪು ಜೀರಿಗೆಯು ಆರೋಗ್ಯ ಸುಧಾರಣೆಯಲ್ಲಿ ಬಲು ಪ್ರಯೋಜನಕಾರಿ.

ಕಲೊಂಜಿ ಸೀಡ್ಸ್, ಕುಲೊಂಜಿ ಸೀಡ್ಸ್, ಕರಿ ಜೀರಿಗೆ ಎಂದು ಕರೆಯಲ್ಪಡುವ ಈ ಕಪ್ಪು ಜೀರಿಗೆಯು ಅಡುಗೆಯ ರುಚಿಯನ್ನು ಹೆಚ್ಚಿಸುವ ಮತ್ತು ಪರಿಮಳ ನೀಡುವ ಗುಣವನ್ನು ಹೊಂದಿದೆ.

ಜ್ಞಾಪಕ ಶಕ್ತಿ ವೃದ್ಧಿಸುವುದು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನುತುಪ್ಪದೊಂದಿಗೆ ಮಿತಪ್ರಮಾಣದಲ್ಲಿ ಕಪ್ಪು ಜೀರಿಗೆ ಬೀಜಗಳನ್ನು ಸೇವಿಸಿದರೆ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಕೂಡಾ ವೃದ್ಧಿಸುತ್ತದೆ.

ಹೃದಯಕ್ಕೆ ಪ್ರಯೋಜನಕಾರಿ

ಕಪ್ಪು ಜೀರಿಗೆ ಹೃದಯದ ಆರೋಗ್ಯ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಪ್ರತಿದಿನ ಮಿತ ಪ್ರಮಾಣದಲ್ಲಿ ಕಪ್ಪು ಜೀರಿಗೆಯನ್ನು ಹಸು ಅಥವಾ ಮೇಕೆ ಹಾಲಿನೊಂದಿಗೆ ತೆಗೆದುಕೊಂಡರೆ ಹೃದಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಕಪ್ಪು ಜೀರಿಗೆ ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಹೆಚ್ಚು ನೀರು ಬರುತ್ತಿರುವವರಿಗೆ ಅಥವಾ ಕಣ್ಣು ಸದಾ ಕೆಂಪಾಗಿರುವವರಿಗೆ ಕಪ್ಪು ಜೀರಿಗೆ ಸೇವನೆ ಹೆಚ್ಚು ಪ್ರಯೋಜನಕಾರಿ.

ತೂಕ ಕಡಿಮೆಗೊಳಿಸುವುದು

ದಪ್ಪ ಇರುವವರು ಕಪ್ಪು ಜೀರಿಗೆಯನ್ನು ತಿಂದರೆ ತೂಕವನ್ನು ಕಡಿಮೆಗೊಳಿಸಬಹುದು. ಕಪ್ಪು ಜೀರಿಗೆಗೆ ನಿಂಬೆರಸ ಹಿಂಡಿ, ಮಿಶ್ರಣ ಮಾಡಿ ಪ್ರತಿದಿನ ಸೇವಿಸಿದರೆ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕಪ್ಪು ಜೀರಿಗೆ ಮತ್ತು ಒಂದು ಚಮಚ ಜೇನುತುಪ್ಪವನ್ನು ನಿಂಬೆ ರಸದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿದರೂ ದೇಹದ ತೂಕ ಕಡಿಮೆಯಾಗುತ್ತದೆ.

ಹೆರಿಗೆಯಾದ ಮಹಿಳೆಯ ಶಕ್ತಿಯನ್ನು ಹೆಚ್ಚಿಸುವುದು

ಹೆರಿಗೆಯ ನಂತರ ಮಹಿಳೆಯರ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಲು ಸೌತೆಕಾಯಿ ರಸದೊಂದಿಗೆ ಕಪ್ಪು ಜೀರಿಗೆಯನ್ನು ಸೇವಿಸಿದರೆ ಒಳ್ಳೆಯದು. ಕಪ್ಪು ಜೀರಿಗೆಯನ್ನು ನೀರಿನೊಂದಿಗೆ ಸೇವಿಸುವುದರಿಂದ ಲ್ಯುಕೋರಿಯಾ, ಮುಟ್ಟು ನೋವು ಮುಂತಾದ ಸಮಸ್ಯೆಗಳಿಗೂ ಪ್ರಯೋಜನಕಾರಿ.

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಳ

ಎರಡರಿಂದ ಮೂರು ಗ್ರಾಂ ಕರಿ ಜೀರಿಗೆಯನ್ನು ಸುಮಾರು ಮೂರು ತಿಂಗಳು ಸೇವಿಸಿದರೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ. ಈ ಕಪ್ಪು ಜೀರಿಗೆ ಅಸ್ತಮಾ ಮತ್ತು ಕೆಮ್ಮಿನ ಸಮಸ್ಯೆಗೂ ಹೆಚ್ಚು ಪ್ರಯೋಜನಕಾರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
ದೇಸಿ ಚಾವಡಿ, ಆಲದಪದವು
ಮೊ: 9449104318

… . ………………………..

?️ಗೋಪಾಲ ಅಂಚನ್, ಆಲದಪದವು