ಬದುಕಿನಲ್ಲಿ ನೊಂದು ಬೆಂದವರ ಶಾಂತಿಧಾಮ ಶ್ರೀ ಸಾಯಿ ಹೀಲಿಂಗ್ ಸೆಂಟರ್, ಮಾದುಕೋಡಿ,ಪೊಳಲಿ

ಯುವಧ್ವನಿ-ಆಧ್ಯಾತ್ಮ ದರ್ಶನ

ಮಂಗಳೂರು:
ದ.ಕ.ಜಿಲ್ಲೆಯ ಪೊಳಲಿ ಕ್ಷೇತ್ರದ ಸನಿಹದ ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ “ಶ್ರೀ ಸಾಯಿ ಹೀಲಿಂಗ್ ಸೆಂಟರ್” ಬದುಕಿನಲ್ಲಿ ನೊಂದು ಬೆಂದವರ ಶಾಂತಿಧಾಮವಾಗಿ ನಾಡಿನ ಗಮನ ಸೆಳೆಯುತ್ತಿದೆ.

ಬಹುಪಯೋಗಿ ರೇಕಿ ವಿದ್ಯೆ ಸಹಿತ ಇತರ ಸ್ವಯಂ ಚಿಕಿತ್ಸಾ ವಿದ್ಯೆಗಳ ತರಗತಿ, ಔಷಧಿ ರಹಿತ ಚಿಕಿತ್ಸೆ ಹಾಗೂ ಮಾರ್ಗದರ್ಶನದ ಮೂಲಕ ಈ ಹೀಲಿಂಗ್ ಸೆಂಟರ್ ಜನರ ಸಮಸ್ಯೆ ಪರಿಹಾರದ ತಾಣವಾಗಿ, ಸಾಂತ್ವನ ಕೇಂದ್ರವಾಗಿ ಜನರನ್ನು ಆಕರ್ಷಿಸುತ್ತಿದೆ.

ಮಾದುಕೋಡಿ ಎಂಬೀ ಹೆಸರು ಇದೀಗ ಎಲ್ಲೆಡೆಯೂ ಚಿರಪರಿಚಿತ. ಕಾರಣ ಇಲ್ಲಿ ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ, ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಶ್ರೀ ಕೊರಗಜ್ಜ ದೈವದ ಶ್ರದ್ಧಾಭಕ್ತಿಯ ಪುಣ್ಯತಾಣವಿದೆ.

ಮತ್ತೊಂದೆಡೆ ಇಲ್ಲಿ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾದ ” ಶ್ರೀ ಸಾಯಿ ಹೀಲಿಂಗ್ ಸೆಂಟರ್”, ಮನುಷ್ಯನ ದೈಹಿಕ,ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಆಧ್ಯಾತ್ಮ ವಿಜ್ಞಾನದ ಮೂಲಕ ಪರಿಹಾರ ನೀಡುವ ಶಕ್ತಿಕೇಂದ್ರವಾಗಿ ಜನಮಾನಸದ ಬದುಕಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ.

ಶ್ರೀ ಸಾಯಿ ಹೀಲಿಂಗ್ ಸೆಂಟರಿನ ಯಶಸ್ವಿಯ ಹಿಂದಿರುವ ಪ್ರೇರಣಾ ಶಕ್ತಿ ವಿಜಯ ಸುವರ್ಣ ಪೊಳಲಿಯವರು. ಆಧ್ಯಾತ್ಮ ಸಾಧಕರಾಗಿ, ಶ್ರೀ ಕೊರಗಜ್ಜ ದೈವದ ಆರಾಧಕರಾಗಿ, ರೇಕಿ ಗುರುಗಳಾಗಿ, ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿ ಜನರ ಗೌರಾವಾದರಗಳಿಗೆ ಪಾತ್ರರಾಗಿರುವ ವಿಜಯ ಸುವರ್ಣ ಅವರು ನೊಂದವರ ಬದುಕಿಗೆ ಬೆಳಕಾದವರು. ತನ್ನ ಬದುಕನ್ನು ಜನರ ಕಷ್ಟಕಾರ್ಪಣ್ಯಗಳ ನಿವಾರಣೆಗೆಂದೇ ಮುಡಿಪಾಗಿಟ್ಟಿರುವ ಇವರು ಸಮಸ್ಯೆ ಹೊತ್ತು ತನ್ನೆಡೆಗೆ ಬರುವ ಅಸಂಖ್ಯಾತ ಜನರ ಸಮಸ್ಯೆಯನ್ನು ಪರಿಹರಿಸುವುದರಲ್ಲೇ ಬದುಕಿನ ಸಾರ್ಥಕತೆಯನ್ನು ಕಾಣುತ್ತಿರುವವರು.

ಸಾಧನೆಯ ಹಾದಿಯಲ್ಲಿ:

ಮಾದುಕೋಡಿ ನಿವಾಸಿಗಳಾದ ಸುಂದರ ಸಾಲ್ಯಾನ್ ಮತ್ತು ಲಕ್ಷ್ಮೀ ದಂಪತಿಗಳ ಪುತ್ರರಾದ ವಿಜಯ ಸುವರ್ಣ ಅವರು ತಂದೆ- ತಾಯಿಯವರ ಆಶೀರ್ವಾದದೊಂದಿಗೆ ನಡೆಸಿದ ಆಧ್ಯಾತ್ಮಿಕ ಸಾಧನೆ ಅನನ್ಯವಾದುದು, ಅಮೋಘವಾದುದು.
ಬಾಲ್ಯದಲ್ಲೇ ಆಧ್ಯಾತ್ಮದತ್ತ ಒಲವು ತೋರಿದ್ದ ಇವರು, ತನ್ನ ಅನಾರೋಗ್ಯದ ನಿಯಂತ್ರಣಕ್ಕಾಗಿ ತಂದೆಯವರ ಮೂಲಕ ಆಧ್ಯಾತ್ಮ ಗುರುಗಳೊರ್ವರ ಬಳಿಗೆ ಹೋಗಿ ಪರಿಹಾರ ಕಂಡು, ನಂತರ ತಾನು ಇಂತಹ ವಿದ್ಯೆಗಳ ಮೂಲಕ ಇತರರ ಸಮಸ್ಯೆಯನ್ನು ಪರಿಹರಿಸಬೇಕೆಂಬ ದೃಷ್ಠಿಯಿಂದ ಆಧ್ಯಾತ್ಮದ ಪಥದಲ್ಲಿ ಮುನ್ನಡೆದವರು.

ಮುಖ್ಯ ಗುರುಗಳಾಗಿ ಶಿವಯೋಗಿ ಜಿ.ಮದನಬಾವಿಯವರನ್ನು ಸ್ವೀಕರಿಸಿ ಇವರ ಸಹಿತ ಎಲ್.ಎ.ಬಾಲಕೃಷ್ಣ ಗುರೂಜಿ ಅವರಿಂದ ವಿವಿಧ ವಿದ್ಯೆಗಳನ್ನು ಕಲಿತುಕೊಂಡ ಇವರು ನಂತರ ರಾಮಚಂದ್ರ ಗುರೂಜಿ, ಲಕ್ಷ್ಮೀ ಶ್ರೀನಿವಾಸ್, ಡಾ.ಮಧುಸೂದನ್, ವಿನಯ ನಾಯಕ್ ಮೊದಲಾದವರಿಂದ 13 ಕ್ಕೂ ಹೆಚ್ಚು ಆಧ್ಯಾತ್ಮ ಮತ್ತು ಸ್ವಯಂಚಿಕಿತ್ಸಾ ವಿದ್ಯೆಗಳನ್ನು ಕರಗತ ಮಾಡಿಕೊಂಡರು.
ತನ್ನ ವಿಶೇಷವಾದ ಆಸಕ್ತಿ, ಅಪರಿಮಿತ ಪರಿಶ್ರಮ ಮತ್ತು ಶ್ರದ್ಧಾಭಕ್ತಿಯಿಂದ ಸಾಧನೆಯ ಪಥದಲ್ಲಿ ಹಂತಹಂತವಾಗಿ ಮೇಲೇರಿದ ವಿಜಯ ಸುವರ್ಣ ಅವರು ಇಂದು ನಾಡಿನ ಜನರ ಹೃದಯದಲ್ಲಿ ಅಭಿಮಾನದ, ಪ್ರೀತಿಯ “ವಿಜಯ ಗುರೂಜಿ” ಆಗಿ ನೆಲೆಯಾಗಿದ್ದಾರೆ.

58 ಸಾವಿರಕ್ಕೂ ಹೆಚ್ಚು ಮಂದಿಗೆ ರೇಕಿ ದೀಕ್ಷೆ

ಶ್ರೀ ಸಾಯಿ ಹೀಲಿಂಗ್ ಸೆಂಟರ್ ಪ್ರಮುಖವಾಗಿ ರೇಕಿ ದೀಕ್ಷೆ ಮತ್ತು ಚಿಕಿತ್ಸೆಗೆ ಹೆಸರಾಗಿದೆ. ಈಗಾಗಲೇ ವಿಜಯ ಸುವರ್ಣ ಅವರು ಈ ಸೆಂಟರಿನಲ್ಲಿ 58 ಸಾವಿರಕ್ಕೂ ಹೆಚ್ಚು ಮಂದಿಗೆ ರೇಕಿ ದೀಕ್ಷೆ ನೀಡಿರುವುದು ಅವರ ಆಧ್ಯಾತ್ಮ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮಂದಿಗೆ ಪೆಂಡ್ಯೂಲಮ್ ಡೌಸಿಂಗ್ ತರಬೇತಿ, ಒಂಬೈನೂರು ಮಂದಿಗೆ ರಾಜಕ್ರಿಯಾ ರೇಕಿ ದೀಕ್ಷೆ, ಏಳ್ನೂರು ಮಂದಿಗೆ ಅಗ್ನಿಹೋತ್ರ ತರಬೇತಿ, ಆರ್ನೂರು ಮಂದಿಗೆ ಏಂಜಲ್ಸ್ & ದೇವಾಸ್ ಥೆರಪಿ ತರಬೇತಿ, ಇನ್ನೂರಕ್ಕೂ ಹೆಚ್ಚು ಮಂದಿಗೆ ಉಲುಕು ಮಂತ್ರ ದೀಕ್ಷೆ ನೀಡಿದ ಹಿರಿಮೆ ವಿಜಯ ಸುವರ್ಣರದ್ದು.

ನಡೆಯುವ ತರಗತಿಗಳು:

ಶ್ರೀ ಸಾಯಿ ಹೀಲಿಂಗ್ ಸೆಂಟರಿನಲ್ಲಿ ರೇಕಿ, ರಾಜಕ್ರಿಯಾ ರೇಕಿ, ಏಂಜಲ್ಸ್ & ದೇವಾಸ್ ಥೆರಪಿ, ಕರುಣಾ ರೇಕಿ, ಪೆಂಡ್ಯೂಲಮ್ ಡೌಸಿಂಗ್, ಕ್ರಿಸ್ಟಲ್ ಹೀಲಿಂಗ್, ಪಿರಮಿಡ್ ಹೀಲಿಂಗ್, ಇ.ಎಫ್.ಟಿ, ಉಲುಕು ಮಂತ್ರ, ಹೋಮ ಥೆರಪಿ, ಅಗ್ನಿ ಹೋತ್ರ, ಮಂತ್ರ ಥೆರಪಿ ಮೊದಲಾದ ವಿದ್ಯೆಗಳ ತರಗತಿಗಳು ನಿರಂತರ ನಡೆಯುತ್ತಿದೆ.
ದೇಶ-ವಿದೇಶ ಸಹಿತ ರಾಜ್ಯ, ಜಿಲ್ಲೆಯ ನಾನಾ ಕಡೆಗಳಿಂದ ವಿವಿಧ ವಿದ್ಯೆಗಳ ದೀಕ್ಷೆ/ತರಬೇತಿಗಾಗಿ, ಔಷಧಿ ರಹಿತ ಚಿಕಿತ್ಸೆಗಾಗಿ, ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ, ಮಾರ್ಗದರ್ಶನ ಹಾಗೂ ಆಶೀರ್ವಾದಕ್ಕಾಗಿ ನಿತ್ಯ ಜನರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ವಿಜಯ ಸುವರ್ಣ ಅವರು ಎಲ್ಲರೊಳಗೊಂದಾಗಿ ಬೆರೆಯುವ, ವಾತ್ಸಲ್ಯಮಯಿ “ಗುರು”ಗಳಾಗಿ ದಿನವಿಡೀ ಸೆಂಟರಿನಲ್ಲಿದ್ದು ತರಗತಿ ಮಾಡುವುದರೊಂದಿಗೆ ಅಗತ್ಯವುಳ್ಳವರಿಗೆ ಹೀಲಿಂಗ್, ಮಾರ್ಗದರ್ಶನ ಹಾಗೂ ಜನರೊಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ, ಶುಭವನ್ನು ಹಾರೈಸುತ್ತಿದ್ದಾರೆ.
ಇಲ್ಲಿ ಬರುವ ಅಸಂಖ್ಯಾತ ಜನರು ದೀಕ್ಷೆ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದು ನೆಮ್ಮದಿಯ ಬದುಕು ನಡೆಸುತ್ತಿರುವುದು “ವಿಜಯ ಗುರೂಜಿ”ಅವರ ಸಾಧನಾ ಶಕ್ತಿ ಮತ್ತು ಶ್ರೀ ಸಾಯಿ ಹೀಲಿಂಗ್ ಸೆಂಟರಿನ ಕಾರ್ಯದಕ್ಷತೆಯ ಪ್ರತೀಕವಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಶ್ರೀ ಸಾಯಿ ಹೀಲಿಂಗ್ ಸೆಂಟರ್, ಮಾದುಕೋಡಿ, ಪೊಳಲಿ- ಮೊಬೈಲ್: 9481060457 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

?️ಗೋಪಾಲ ಅಂಚನ್, ಆಲದಪದವು
ಸಂಪಾದಕರು, ಯುವಧ್ವನಿ ನ್ಯೂಸ್

Mob:9449104318.

Email:[email protected]

Web: www.yuvadhvani.com