ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಫೆ.17ರಿಂದ ಫೆ.21ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ

ವಾಮದಪದವು: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕಾರಣೀಕ ಕ್ಷೇತ್ರ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.17ರಿಂದ ಫೆ.21ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವವು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದೆ.


ಫೆ.17, 18, 19 ರಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮ, ಭಜನೆ, ಅನ್ನಸಂತರ್ಪಣೆ, ಸಾಂಸ್ಕ್ರತಿಕ ಕಾರ್ಯಕ್ರಮ, ಫೆ.20 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಭಜನೆ, ರಾತ್ರಿ ಪುಂಜಾಲಕಟ್ಟೆ ಮುರುಘೇಂದ್ರ ಮಿತ್ರ ಮಂಡಳಿಯವರಿಂದ ತುಳು ನಾಟಕ, ಫೆ.21ರಂದು ಬೆಳಿಗ್ಗೆ ತುಲಾಭಾರ ಸೇವೆ, ಅನ್ನಸಂತರ್ಪಣೆ, ರಾತ್ರಿ ದೈವಗಳಿಗೆ ನೇಮೋತ್ಸವ, ಮಹಾರಥೋತ್ಸವ, ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.


ಕ್ಷೇತ್ರದ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪೂರ್ಣಾನುಗ್ರಹಕ್ಕೆ ಪಾತ್ರರಾಗುವಂತೆ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಂಗೇರಾ ಕಲ್ಲುಕೊಡಂಗೆ, ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿಂತಾಯ, ಅರ್ಚಕ ಸದಾಶಿವ ಕಕೃಣ್ಣಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋಹನ್ ದಾಸ್ ಗಟ್ಟಿ ಪೊರಿಗುಡ್ಡೆ, ದೇವಿಪ್ರಸಾದ್ ಶೆಟ್ಟಿ ಪಾಲೆದಮರ, ದಯಾನಂದ ಎಸ್.ಎರ್ಮೆನಾಡು, ರಮಣಿ ಸಿ.ರೈ ಪಡಂತರಕೋಡಿ, ಹರ್ಷಿಣಿ ಪುಷ್ಪಾನಂದ ಮೂರ್ಜೆ ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.

ವರದಿ: ಗೋಪಾಲ ಅಂಚನ್
Mob: 9449104318